ದಿನಾಂಕ 29-07-2016 ರಂದು ಶ್ರೀ ಜೆ ಸಿ ಬಿ ಎಂ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ 'ಹುಲಿ ಸಂರಕ್ಷಣೆಯ ಮಹತ್ವ' ಕುರಿತಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಎಂ ವಿ ಕೇಶವ ಮೂರ್ತಿಯವರು ಹುಲಿ ಸಂರಕ್ಷಣೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಭಾರತದಲ್ಲಿ ಇಂದು ಕೇವಲ 2000 ದಷ್ಟು ಇರುವ ಹುಲಿಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಸಚಿತ್ರ ವಿವರವನ್ನು ನೀಡಿದರು, ಹುಲಿ ಸಂರಕ್ಷಣೆಯಲ್ಲಿ ಸರ್ಕಾರಗಳ ಜೊತೆಗೆ ಜನರನ್ನು ತೊಡಗಿಸಿಕೊಂಡು ಹುಲಿ ಸಂರಕ್ಷಣೆಯನ್ನು ಯಶಸ್ವಿಗೊಳಿಸುವ ಬಗ್ಗೆ ಅತ್ಯಂತ ಸರಳವಾಗಿ ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಯುವಜನತೆ ವನ್ಯ ಜೀವಗಳ ಬಗ್ಗೆ ಆಸಕ್ತಿ ಹಾಗು ಪ್ರೀತಿಯನ್ನು ಬೆಳೆಸಿಕೊಳ್ಳುವುದರ ಮೂಲಖ ನಶಿಸಿ ಹೋಗುತ್ತಿರುವ ಜೀವ ವೈವಿದ್ಯತೆಯನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಸಸ್ಯಶಾಸ್ತ್ರದ ಉಪನ್ಯಾಸಕರುಗಳಾದ ಶ್ರೀ ರಾಘವೇಂದ್ರ, ಶ್ರೀ ಅಭಿಜಿತ್ ರವರು ನಿರ್ವಹಿಸಿದ್ದರು
No comments:
Post a Comment