ಮುಖ್ಯ ಅತಿಥಿಗಳಾಗಿ ಹವಾಲ್ಧಾರ್ ನವಾಜ್ ರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸ್ವಾಗತ್, ಅನಿರುದ್ದ್ ಹಾಗು ಹರ್ಷಿತ್ ರವರು ಕಾರ್ಗಿಲ್ ಯುದ್ಧದಲ್ಲಿ ಹೆಮ್ಮೆಯಿಂದ ಹೋರಾಡಿದ ಭಾರತೀಯ ಸೈನಿಕರ ಬಗ್ಗೆ ಕಿರು ಪರಿಚಯವನ್ನು ನೀಡಿದರು
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿಗಳು ಕಾರ್ಗಿಲ್ ಯುದ್ದದ ಸಮಯದ ನೆನಪುಗಳನ್ನು ಹಾಗು 2004 ರ ಸುನಾಮಿ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆಯ ನೆನಪುಗಳನ್ನು ಬಿಚ್ಚಿಟ್ಟರು. ಯುವ ಜನತೆ ಸೈನ್ಯ ಸೇರುವ ಮೂಲಖ ದೇಶ ಸೇವೆಯ ಅವಕಾಶವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಪದವಿ ವಿಭಾಗದ ಪ್ರಾಚಾರ್ಯರಾದ ಡಾ ದೇವೀದಾಸ್ ನಾಯಕ್ , ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಎ ಜಿ ಪ್ರಶಾಂತ್ ,NCC ಮಖ್ಯಸ್ಥರಾದ ಲೆಫ್ಟಿನೆಂಟ್ ಡಾ ಕುಮಾರಸ್ವಾಮಿ ಉಡುಪರವರು ಭಾಗವಹಿಸಿದ್ದರು
ಸಭಾ ಕಾರ್ಯಕ್ರಮದ ನಂತರ ಶೃಂಗೇರಿಯ ಮುಖ್ಯ ರಸ್ತೆಯಲ್ಲಿ NCC ಕೆಡೆಟ್ ಗಳು ಜಾಥಾನಡೆಸಿಕೊಟ್ಟರು
No comments:
Post a Comment