Friday, July 22, 2016

ಸಾಹಿತ್ಯ ಸಂಘದ ಉದ್ಘಾಟನೆ

ದಿನಾಂಕ 22-07-2016 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಗುರು ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾll ರಾಘವೇಂದ್ರ ಭಟ್ ರವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಚಾರ್ಯರಾದ ಡಾll ದೇವಿದಾಸ್ ನಾಯ್ಕ್ ರವರು ಆಗಮಿಸಿದ್ದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಎಂ.ಎಸ್.ಜನಾರ್ಧನ್ ಮುಂಡಗಾರುರವರು ಆಗಮಿಸಿದ್ದರು.


 ಉಪನ್ಯಾಸವನ್ನು ನೀಡಿದಂತಹ ಜನಾರ್ಧನ್ ರವರು "ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದು ಉಪನಿಷತ್ತಿನ ಧ್ಯೇಯ. ತರಗತಿಯ ಕೊಠಡಿಯೊಳಗೆ ತಿಳಿಸಿಕೊಟ್ಟವರು ಮಾತ್ರ ಗುರುವಲ್ಲ, ಜೀವನದ ಪಾಠವನ್ನು ಹೇಳಿಕೊಟ್ಟವರೂ ಸಹ ನಮ್ಮ ಜೀವನದ ಗುರುಗಳಾಗುತ್ತಾರೆ" ಎಂದು ತಿಳಿಸಿದರು. ವ್ಯಾಸ ಭಾರತ, ವೇದ-ಉಪನಿಷತ್ ಗಳ ಉದಾಹರಣೆಯನ್ನು ನೀಡಿ ಗುರುವಿನ ಮಹತ್ವದ ಬಗ್ಗೆ ತಿಳಿಸಿದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಎ.ಜಿ. ಪ್ರಶಾಂತ್ ಉಪಸ್ಥಿತರಿದ್ದರು.
ಚಂದನಾರವರು ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ವೃಂದ ಹಾಜರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.

1 comment:

ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...