Sunday, July 31, 2016

ಅಂತರಾಷ್ಟ್ರೀಯ ಹುಲಿ ದಿನಾಚರಣೆ

ದಿನಾಂಕ 29-07-2016 ರಂದು ಶ್ರೀ ಜೆ ಸಿ ಬಿ ಎಂ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ 'ಹುಲಿ ಸಂರಕ್ಷಣೆಯ ಮಹತ್ವ' ಕುರಿತಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಎಂ ವಿ ಕೇಶವ ಮೂರ್ತಿಯವರು ಹುಲಿ ಸಂರಕ್ಷಣೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಭಾರತದಲ್ಲಿ ಇಂದು ಕೇವಲ 2000 ದಷ್ಟು ಇರುವ ಹುಲಿಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಸಚಿತ್ರ ವಿವರವನ್ನು ನೀಡಿದರು, ಹುಲಿ ಸಂರಕ್ಷಣೆಯಲ್ಲಿ ಸರ್ಕಾರಗಳ ಜೊತೆಗೆ ಜನರನ್ನು ತೊಡಗಿಸಿಕೊಂಡು ಹುಲಿ ಸಂರಕ್ಷಣೆಯನ್ನು ಯಶಸ್ವಿಗೊಳಿಸುವ ಬಗ್ಗೆ ಅತ್ಯಂತ ಸರಳವಾಗಿ ಉಪನ್ಯಾಸವನ್ನು ನೀಡಿದರು.





ಈ ಸಂದರ್ಭದಲ್ಲಿ ಯುವಜನತೆ ವನ್ಯ ಜೀವಗಳ ಬಗ್ಗೆ ಆಸಕ್ತಿ ಹಾಗು ಪ್ರೀತಿಯನ್ನು ಬೆಳೆಸಿಕೊಳ್ಳುವುದರ ಮೂಲಖ ನಶಿಸಿ ಹೋಗುತ್ತಿರುವ ಜೀವ ವೈವಿದ್ಯತೆಯನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಸಸ್ಯಶಾಸ್ತ್ರದ ಉಪನ್ಯಾಸಕರುಗಳಾದ ಶ್ರೀ ರಾಘವೇಂದ್ರ, ಶ್ರೀ ಅಭಿಜಿತ್ ರವರು ನಿರ್ವಹಿಸಿದ್ದರು

Wednesday, July 27, 2016

ಕಾರ್ಗಿಲ್ ವಿಜಯ ದಿವಸ್

ಜೆ ಸಿ ಬಿ ಎಂ ಕಾಲೇಜಿನಲ್ಲಿ NCC ಹಾಗು NSS ಘಟಕಗಳ ವತಿಯಿಂದ  ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಮುಖ್ಯ ಅತಿಥಿಗಳಾಗಿ ಹವಾಲ್ಧಾರ್ ನವಾಜ್ ರವರು  ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸ್ವಾಗತ್, ಅನಿರುದ್ದ್ ಹಾಗು ಹರ್ಷಿತ್ ರವರು ಕಾರ್ಗಿಲ್ ಯುದ್ಧದಲ್ಲಿ ಹೆಮ್ಮೆಯಿಂದ ಹೋರಾಡಿದ ಭಾರತೀಯ ಸೈನಿಕರ ಬಗ್ಗೆ ಕಿರು ಪರಿಚಯವನ್ನು ನೀಡಿದರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಹವಾಲ್ಧಾರ್ ನವಾಜ್ ರನ್ನು ಸನ್ಮಾನಿಸಲಾಯಿತು


ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿಗಳು ಕಾರ್ಗಿಲ್ ಯುದ್ದದ ಸಮಯದ ನೆನಪುಗಳನ್ನು ಹಾಗು 2004  ರ ಸುನಾಮಿ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆಯ ನೆನಪುಗಳನ್ನು ಬಿಚ್ಚಿಟ್ಟರು. ಯುವ ಜನತೆ ಸೈನ್ಯ ಸೇರುವ ಮೂಲಖ ದೇಶ ಸೇವೆಯ ಅವಕಾಶವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಪದವಿ ವಿಭಾಗದ ಪ್ರಾಚಾರ್ಯರಾದ ಡಾ ದೇವೀದಾಸ್ ನಾಯಕ್ , ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಎ ಜಿ ಪ್ರಶಾಂತ್ ,NCC ಮಖ್ಯಸ್ಥರಾದ ಲೆಫ್ಟಿನೆಂಟ್ ಡಾ ಕುಮಾರಸ್ವಾಮಿ ಉಡುಪರವರು ಭಾಗವಹಿಸಿದ್ದರು

ಸಭಾ ಕಾರ್ಯಕ್ರಮದ ನಂತರ ಶೃಂಗೇರಿಯ ಮುಖ್ಯ ರಸ್ತೆಯಲ್ಲಿ NCC ಕೆಡೆಟ್ ಗಳು  ಜಾಥಾನಡೆಸಿಕೊಟ್ಟರು




Friday, July 22, 2016

ಸಾಹಿತ್ಯ ಸಂಘದ ಉದ್ಘಾಟನೆ

ದಿನಾಂಕ 22-07-2016 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಗುರು ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾll ರಾಘವೇಂದ್ರ ಭಟ್ ರವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಚಾರ್ಯರಾದ ಡಾll ದೇವಿದಾಸ್ ನಾಯ್ಕ್ ರವರು ಆಗಮಿಸಿದ್ದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಎಂ.ಎಸ್.ಜನಾರ್ಧನ್ ಮುಂಡಗಾರುರವರು ಆಗಮಿಸಿದ್ದರು.


 ಉಪನ್ಯಾಸವನ್ನು ನೀಡಿದಂತಹ ಜನಾರ್ಧನ್ ರವರು "ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದು ಉಪನಿಷತ್ತಿನ ಧ್ಯೇಯ. ತರಗತಿಯ ಕೊಠಡಿಯೊಳಗೆ ತಿಳಿಸಿಕೊಟ್ಟವರು ಮಾತ್ರ ಗುರುವಲ್ಲ, ಜೀವನದ ಪಾಠವನ್ನು ಹೇಳಿಕೊಟ್ಟವರೂ ಸಹ ನಮ್ಮ ಜೀವನದ ಗುರುಗಳಾಗುತ್ತಾರೆ" ಎಂದು ತಿಳಿಸಿದರು. ವ್ಯಾಸ ಭಾರತ, ವೇದ-ಉಪನಿಷತ್ ಗಳ ಉದಾಹರಣೆಯನ್ನು ನೀಡಿ ಗುರುವಿನ ಮಹತ್ವದ ಬಗ್ಗೆ ತಿಳಿಸಿದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಎ.ಜಿ. ಪ್ರಶಾಂತ್ ಉಪಸ್ಥಿತರಿದ್ದರು.
ಚಂದನಾರವರು ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ವೃಂದ ಹಾಜರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.

Tuesday, July 19, 2016

FIELDWORK IN KUDREMUKH NATIONAL PARK BY THE DEPARTMENT OF BOTANY IN COLLABORATION WITH THE FOREST DEPARTMENT

The department of Botany of our college undertook the first fieldwork of the academic year 2016-17 form 12th June to 17th June, under the guidance of Dr. ESK Udupa and assistance of the forest department. The study area was Kudremukh national park range. The team consisted of 3 members from the teaching staff and 11 students. The purpose of the work was to study the effects of forest fires on the grassland-dominating shola forests of the region.  A total of 18 transects were laid on the different hills of the range, each of 500m length.

As it was the onset of pre-monsoon, the misty shola forest was not just swampy but leach-laden as well! The daily schedule was to wake up early in the morning, have breakfast and leave the ‘Bhagavathi nature camp’ for exploring the beautiful mist-covered hills… an average of 4 transects were laid per day…. The work was also interrupted now and then by drizzles!

The fieldwork was another wonderful opportunity for the students of BZC to explore the beautiful shola forests of the Kudremukh National Park range of western ghats… 








ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...