Sunday, March 5, 2017

ಸಂಸ್ಥಾಪಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ

ದಿನಾಂಕ 3-03-2017 ರಂದು ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರಿಹರಪುರ ಶಾರದಾ ಲಕ್ಷ್ಮೀನೃಸಿಂಹ ಪೀಠದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ವಹಿಸಿದ್ದರು

ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಸಂಸ್ಮರಣಾ ಉಪನ್ಯಾಸವನ್ನು ವಿದ್ವಾನ್ ಜಿ ಮಹಾಬಲೇಶ್ವರ ಭಟ್ ರವರು ನಡೆಸಿಕೊಟ್ಟರು

ಕಾಲೇಜಿನಲ್ಲಿ 2015-2016 ನೇ ಸಾಲಿನಲ್ಲಿ ವಿಧ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯನ್ನು ಪಡೆದ ವಿಧ್ಯಾರ್ಥಿಗಳಿಗೆ ಬಂಗಾರದ ಪದಕವನ್ನು ಶ್ರೀ ಶ್ರೀ ಗಳು ನೀಡಿದರು . ಈ ಸಂದರ್ಭದಲ್ಲಿ ಹಲವು ವಿಧ್ಯಾರ್ಥಿಗಳು ವಿಧ್ಯಾರ್ಥಿವೇತನವನ್ನು ಹಾಗು ಪ್ರತಿಭಾ ಪುರಸ್ಕಾರವನ್ನು ಶ್ರೀ ಶ್ರೀ ಗಳಿಂದ ಪಡೆದರು

2016 ರಲ್ಲಿ ಕಾಲೇಜಿನಿಂದ ನಿವೃತ್ತಿ ಹೊಂದಿದ ಹಾಗು 2017 ರ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದುತ್ತಿರುವ ಉಪನ್ಯಾಸಕರು ಹಾಗು ಬೋದಕೇತರ ವರ್ಗದವರನ್ನು ಶ್ರೀ ಶ್ರೀ ಗಳು ಸನ್ಮಾನಿಸಿದರು

ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ಗಳು ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ, ಲೌಕಿಕ ಜ್ಯಾನದೊಂದಿಗೆ ವ್ಯಕ್ತಿ ಅಧ್ಯಾತ್ಮಿಕ ಜ್ಯಾನವನ್ನು ಬೆಳೆಸಿಕೊಂಡಾಗ ಮಾತ್ರ ಪ್ರಾಪಂಚಿಕ ದುಃಖದಿಂದ ಹೊರಬರಲು ಸಾಧ್ಯವೆಂದರು

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು ಹಾಗು ಆಡಳಿತ ಮಂಡಳಿಯ ಸದಸ್ಯರುಗಳು ಹಾಗು ಪ್ರತಿಭಾ ಪುರಸ್ಕೃತರ ಪೋಷಕರು ಪಾಲ್ಗೊಂಡಿದ್ದರು



























ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಪ್ರತಿಮೆ ಅನಾವರಣ

ದಿನಾಂಕ 15-02-2017 ರಂದು ಕಾಲೇಜಿನಲ್ಲಿ ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಮುಂಜಾನೆ 7 ಘಂಟೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ಗಣಪತಿ ಹೋಮವನ್ನು ನೆರವೇರಿಸಲಾಯಿತು

ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರಭಾರತೀ  ಸನ್ನಿಧಾನಂಗಳವರು ನೆರವೇರಿಸಿ ಆಶೀರ್ವಚನವನ್ನು ನೀಡಿದರು

ಕಾರ್ಯಕ್ರಮದಲ್ಲಿ ಡಾ II ವಿ ಅರ್ ಗೌರೀಶಂಕರ್ , ಶೃಂಗೇರಿ ಕ್ಷೇತ್ರದ ಶಾಸಕರಾದ ಡಿ ಏನ್ ಜೀವರಾಜ್ , ಡಾ II ಎಚ್ ಶಾಂತಾರಾಮ್ , ಡಾ II ದೇವಿದಾಸ್ ನಾಯಕ್ ಹಾಗು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು

ಈ ಕಾರ್ಯಕ್ರಮದ ಹಿಂದಿನ ದಿನವಾದ 14-02-2017 ರಂದು ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಪ್ರತಿಮೆಯನ್ನು ಶ್ರೀ ಮಠ ಶೃಂಗೇರಿಯಿಂದ ಭವ್ಯ ಮೆರವಣಿಗೆಯ ಮೂಲಖ ಕಾಲೇಜಿಗೆ ತರಲಾಯಿತು. ಈ ಮೆರವಣಿಗೆಯಲ್ಲಿ ಕಾಲೇಜಿನ ವಿಧ್ಯಾರ್ಥಿಗಳು, ಉಪನ್ಯಾಸಕರುಗಳು ಹಾಗು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಮರಗಾಲು ವೇಷದಾರಿಗಳು ಮೆರವಣಿಗೆಯ ಕೇಂದ್ರ ಬಿಂದುಗಳಾಗಿದ್ದರು . ಈ ಕಾರ್ಯಕ್ರಮವನ್ನು  ಕಾಲೇಜಿನ ಫೇಸ್ ಬುಕ್ ನಲ್ಲಿ ಪೇಜ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು 

ದಿನಾಂಕ 15-02-2017 ರಂದು ಪ್ರತಿಮೆ ಅನಾವರಣದ ನಂತರ, ಮಧ್ಯಾನ್ಹ ಕಾಲೇಜಿನ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಂಜೆ 4 ಘಂಟೆಗೆ ಕಾಲೇಜಿನ ವಿಧ್ಯಾರ್ಥಿಗಳಿಂದ 'ಮಹಿಷಾಸುರ ಮರ್ಧಿನಿ' ಎಂಬ ಯಕ್ಷಗಾನವನ್ನು ಆಯೋಜಿಸಲಾಗಿತ್ತು

ಇದೇ ದಿನ ಸಂಜೆ ವಿಧ್ಯಾರ್ಥಿ ಹಾಗು ವಿಧ್ಯಾರ್ಥಿನಿಯರ ನಿಲಯದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಯಾಗಿ ಶೃಂಗೇರಿ ವೃತ್ತ ನಿರೀಕ್ಷಕರಾದ ಪ್ರಮೋದ್ ರವರು ಆಗಮಿಸಿದ್ದರು


































































































































ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...