ಮುಂಜಾನೆ 7 ಘಂಟೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ಗಣಪತಿ ಹೋಮವನ್ನು ನೆರವೇರಿಸಲಾಯಿತು
ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ನೆರವೇರಿಸಿ ಆಶೀರ್ವಚನವನ್ನು ನೀಡಿದರು
ಕಾರ್ಯಕ್ರಮದಲ್ಲಿ ಡಾ II ವಿ ಅರ್ ಗೌರೀಶಂಕರ್ , ಶೃಂಗೇರಿ ಕ್ಷೇತ್ರದ ಶಾಸಕರಾದ ಡಿ ಏನ್ ಜೀವರಾಜ್ , ಡಾ II ಎಚ್ ಶಾಂತಾರಾಮ್ , ಡಾ II ದೇವಿದಾಸ್ ನಾಯಕ್ ಹಾಗು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು
ಈ ಕಾರ್ಯಕ್ರಮದ ಹಿಂದಿನ ದಿನವಾದ 14-02-2017 ರಂದು ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಪ್ರತಿಮೆಯನ್ನು ಶ್ರೀ ಮಠ ಶೃಂಗೇರಿಯಿಂದ ಭವ್ಯ ಮೆರವಣಿಗೆಯ ಮೂಲಖ ಕಾಲೇಜಿಗೆ ತರಲಾಯಿತು. ಈ ಮೆರವಣಿಗೆಯಲ್ಲಿ ಕಾಲೇಜಿನ ವಿಧ್ಯಾರ್ಥಿಗಳು, ಉಪನ್ಯಾಸಕರುಗಳು ಹಾಗು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಮರಗಾಲು ವೇಷದಾರಿಗಳು ಮೆರವಣಿಗೆಯ ಕೇಂದ್ರ ಬಿಂದುಗಳಾಗಿದ್ದರು . ಈ ಕಾರ್ಯಕ್ರಮವನ್ನು ಕಾಲೇಜಿನ ಫೇಸ್ ಬುಕ್ ನಲ್ಲಿ ಪೇಜ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು
ದಿನಾಂಕ 15-02-2017 ರಂದು ಪ್ರತಿಮೆ ಅನಾವರಣದ ನಂತರ, ಮಧ್ಯಾನ್ಹ ಕಾಲೇಜಿನ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಂಜೆ 4 ಘಂಟೆಗೆ ಕಾಲೇಜಿನ ವಿಧ್ಯಾರ್ಥಿಗಳಿಂದ 'ಮಹಿಷಾಸುರ ಮರ್ಧಿನಿ' ಎಂಬ ಯಕ್ಷಗಾನವನ್ನು ಆಯೋಜಿಸಲಾಗಿತ್ತು
ಇದೇ ದಿನ ಸಂಜೆ ವಿಧ್ಯಾರ್ಥಿ ಹಾಗು ವಿಧ್ಯಾರ್ಥಿನಿಯರ ನಿಲಯದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶೃಂಗೇರಿ ವೃತ್ತ ನಿರೀಕ್ಷಕರಾದ ಪ್ರಮೋದ್ ರವರು ಆಗಮಿಸಿದ್ದರು
No comments:
Post a Comment