Sunday, January 1, 2017

ಪರಿಸರ ಹಾಗು ವನ್ಯ ಜೀವಿ ಸಂರಕ್ಷಣೆ ಅರಿವು ಕಾರ್ಯಕ್ರಮ

ಕುದುರೆಮುಖ ವನ್ಯಜೀವಿ ವಿಭಾಗ ವಲಯ,ಕಾರ್ಕಳ ಹಾಗು ಕೆರೆಕಟ್ಟೆ ವನ್ಯಜೀವಿ ವಲಯ  ವತಿಯಿಂದ ಕಾಲೇಜಿನ ವಿಧ್ಯಾರ್ಥಿಗಳಿಗೆ ದಿನಾಂಕ 28-12-2016 ರಂದು ಪರಿಸರ ಹಾಗು ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾಲೇಜಿನ 50 ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು

ವಿಧ್ಯಾರ್ಥಿಗಳಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುರಿಂಜಾಲ ಪರ್ವತ ಶ್ರೇಣಿಗೆ ಚಾರಣವನ್ನು ಏರ್ಪಡಿಸಲಾಗಿತ್ತು

ಭಗವತಿ ಪ್ರಕೃತಿ ಶಿಬಿರದಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಉಪನ್ಯಾಸವನ್ನು ಕಾಲೇಜಿನ ಉಪನ್ಯಾಸಕರಾದ ರಾಘವೇಂದ್ರರವರು ನೆರವೇರಿಸಿಕೊಟ್ಟರು

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಭಿಜಿತ್, ಅರಣ್ಯ ಅಧಿಕಾರಿಗಳಾದ ಗೋಪಾಲ್ ಹಾಗು ರಾಜೇಂದ್ರರವರು ಉಪಸ್ಥಿತರಿದ್ದರು

ವಿಧಾರ್ಥಿಗಳು ಕುದುರೆಮುಖದ ಶೋಲಾ ಅರಣ್ಯದ ಸೊಬಗನ್ನು ಕಣ್ತುಂಬಿಕೊಂಡು ಆನಂದಿಸಿದರು









No comments:

Post a Comment

ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...