Monday, January 30, 2017

NSS ಸ್ವಯಂ ಸೇವಕಿಯರ ಸಾಧನೆ

ಕಾಲೇಜಿನ NSS ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

ದಿನಾಂಕ 26-01-2017 ರಂದು ಮಾಣಿಕ್ ಷಾ ಮೈಧಾನದಲ್ಲಿ ನಡೆದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕಾಲೇಜಿನ ದ್ವಿತೀಯ ಬಿ ಎಸ್ ಸಿ ವಿಧ್ಯಾರ್ಥಿನಿ ಮಂದಾರ ಪಾಲ್ಗೊಂಡು ಕಾಲೇಜಿಗೆ ಹೆಮ್ಮೆಯನ್ನು ತಂದಿರುತ್ತಾರೆ. 2016 ರ  ಗಣರಾಜ್ಯೋತ್ಸವದ ಪಥ ಸಂಚಲನದಲ್ಲೂ ಕೂಡ ಕಾಲೇಜಿನ ವಿಧ್ಯಾರ್ಥಿನಿ ಕಾವ್ಯ ಹೆಚ್ ಏನ್ ರವರು ಪಾಲ್ಗೊಂಡ್ಡಿದ್ದರು.ಸತತ ಎರಡು ವರ್ಷಗಳಿಂದ ಏನ್ ಎಸ್ ಎಸ್ ಘಟಕಕ್ಕೆ ಈ ಗೌರವ ದೊರೆಯುತ್ತಿದೆ

2015-2016 ನೇ ಸಾಲಿನ ಉತ್ತಮ ಏನ್ ಎಸ್ ಎಸ್ ಸ್ವಯಂ ಸೇವಕಿಯಾಗಿ ಕಾಲೇಜಿನ ಹಳೆಯ ವಿಧ್ಯಾರ್ಥಿನಿ ಕಾವ್ಯ ಹೆಚ್ ಏನ್ ರವರು ಆಯ್ಕೆಯಾಗಿರುವುದು ಏನ್ ಎಸ್ ಎಸ್ ಘಟಕದ ಸಾಧನೆಗೆ ಸಂದ ಮತ್ತೊಂದು ಗರಿ

30-01-2017 ರಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಇಬ್ಬರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಏನ್ ಎಸ್ ಎಸ್ ಅಧಿಕಾರಿಗಳು ಹಾಗು ಅತಿಥಿಯಾಗಿ ರೈತ ನಾಯಕ ಕಡಿದಾಳು ಶ್ಯಾಮಣ್ಣನವರು ಉಪಸ್ಥಿತರಿದ್ದರು






Sunday, January 15, 2017

ಯೋಧ ನಮನ

ದಿನಾಂಕ 07-01-2016 ರರಂದು ಕಾಲೇಜಿನಲ್ಲಿ 'ಯೋಧ ನಮನ' ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಶೃಂಗೇರಿ,ಕೊಪ್ಪ, ಏನ್ ಅರ್ ಪುರ ಸುತ್ತ ಮುತ್ತಲಿನ ನಿವೃತ್ತ ಯೋಧರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

ಮುಂಜಾನೆ 10.30 ರ ಸಮಯಕ್ಕೆ ಆಗಮಿಸಿದ ನಿವೃತ್ತ ಯೋಧರಿಗೆ ಕಾಲೇಜಿನ ಏನ್ ಸಿ ಸಿ ಹಾಗು ಏನ್ ಎಸ್ ಎಸ್ ವಿಧ್ಯಾರ್ಥಿಗಳು ಅಭೂತಪೂರ್ವ ಸ್ವಾಗತವನ್ನು ನೀಡಿದರು

ಕಾರ್ಯಕ್ರಮಕ್ಕೆ ಹೊರನಾಡಿನ ಡಾ II ಭೀಮೇಶ್ವರ ಜೋಷಿಯವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು

ಭೋಜನ ಸಮಯದ ನಂತರ ನಿವೃತ್ತ ಯೋಧರುಗಳು ವಿಧ್ಯಾರ್ಥಿಗಳ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಕಾಲೇಜಿನ ಪ್ರಾಂಶುಪಾಲರಾದ ಡಾ II ದೇವಿದಾಸ್ ನಾಯಕ್ , ಏನ್ ಸಿ ಸಿ ಮುಖ್ಯಸ್ತರಾದ ಡಾ II ಕುಮಾರಸ್ವಾಮಿ ಉಡುಪ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು

ದೇಶ ಭಕ್ತಿಯ ಹುರುಪು ಮೂಡಿಸುವ ಈ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಯೋಧರುಗಳು ಭಾಗವಹಿಸಿ ವಿಧ್ಯಾರ್ಥಿಗಳನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು

ಕಾಲೇಜಿನ ಇತಿಹಾಸದಲ್ಲೇ  ಮೊಟ್ಟ ಮೊದಲ ಭಾರಿಗೆ ಈ ಕಾರ್ಯಕ್ರಮವನ್ನು ಕಾಲೇಜಿನ ಫೇಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಇದು ಕಾಲೇಜಿನ ಹಳೆ ವಿಧ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು





Saturday, January 14, 2017

ಕ್ಯಾಶ್ ಲೆಸ್ ಎಕಾನಮಿ

ದಿನಾಂಕ 04-1-2016 ರಂದು ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಕ್ಯಾಶ್ ಲೆಸ್ ಎಕಾನಮಿ  ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕಾಲೇಜಿನ  ಸಸ್ಯಶಾಸ್ತ್ರದ ಉಪನ್ಯಾಸಕರಾದ ರಾಘವೇಂದ್ರರವರು ಕ್ಯಾಶ್ ಲೆಸ್ ಎಕಾನಮಿಯ ಕುರಿತಾದ ಮಾಹಿತಿಯನ್ನು ನೀಡಿದರು. ಪ್ರಾತ್ಯಕ್ಷಿಕತೆಯೊಂದಿಗೆ ಡೆಬಿಟ್,ಕ್ರೆಡಿಟ್ ಹಾಗು ಇತ್ತೀಚಿಗೆ ಅನಾವರಣಗೊಂಡ ಭೀಮ್ app ನ ಮಾಹಿತಿಯನ್ನು ಸವಿರವಾಗಿ ನೀಡಿದರು

ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ ನಾಯಕ್ ,ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿಧ್ಯಾದರ, ಎಂ ಎ ಸ್ನಾತ್ತಕೊತ್ತರ ವಿಭಾಗದ ಸಂಯೋಜಕರಾದ ಎಚ್ ಸಿ ವೀರಪ್ಪ ಗೌಡ ಹಾಗು ಇತಿಹಾಸ ವಿಭಾಗದ ಮುಖ್ಯಸ್ಥರಾದ ಕೆ ಪಿ ಪ್ರಕಾಶ್ ರವರು ಈ ಸಂಧರ್ಭದಲ್ಲಿ ಹಾಜರಿದ್ದರು



Wednesday, January 4, 2017

ಭಾವಾಂತರಂಗ

ದಿನಾಂಕ 2-01-2017 ರಂದು ಪದವಿ ಪೂರ್ವ ವಿಭಾಗದಿಂದ 'ಭಾವಾಂತರಂಗ' ಸಾಂಸ್ಕೃತಿಕ ಕಾರ್ಯಕ್ರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು

ಶೃಂಗೇರಿ ಹಾಗು ಕೊಪ್ಪ ತಾಲೋಕಿನ ಆಯ್ಧ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೋರಂಜನೆಯನ್ನು ನೀಡಿದರು

ಕಾರ್ಯಕ್ರಮವನ್ನು ಕಿರುತೆರೆ ನಿರ್ದೇಶಕ ರಮೇಶ್ ಬೇಗರ್ ರವರು ಉದ್ಘಾಟಿಸಿ ವಿಧ್ಯಾರ್ಥಿಗಳಿಗೆ ಹಿತವಚನವನ್ನಾಡಿದರು

ಸಂಜೆಯವರೆಗೂ ನಡೆದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಯಿತು

ಪದವಿ ಪೂರ್ವ ವಿಭಾಗದ ವಿಧ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯೊಂದಿಗೆ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು















Sunday, January 1, 2017

ಪರಿಸರ ಹಾಗು ವನ್ಯ ಜೀವಿ ಸಂರಕ್ಷಣೆ ಅರಿವು ಕಾರ್ಯಕ್ರಮ

ಕುದುರೆಮುಖ ವನ್ಯಜೀವಿ ವಿಭಾಗ ವಲಯ,ಕಾರ್ಕಳ ಹಾಗು ಕೆರೆಕಟ್ಟೆ ವನ್ಯಜೀವಿ ವಲಯ  ವತಿಯಿಂದ ಕಾಲೇಜಿನ ವಿಧ್ಯಾರ್ಥಿಗಳಿಗೆ ದಿನಾಂಕ 28-12-2016 ರಂದು ಪರಿಸರ ಹಾಗು ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾಲೇಜಿನ 50 ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು

ವಿಧ್ಯಾರ್ಥಿಗಳಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುರಿಂಜಾಲ ಪರ್ವತ ಶ್ರೇಣಿಗೆ ಚಾರಣವನ್ನು ಏರ್ಪಡಿಸಲಾಗಿತ್ತು

ಭಗವತಿ ಪ್ರಕೃತಿ ಶಿಬಿರದಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಉಪನ್ಯಾಸವನ್ನು ಕಾಲೇಜಿನ ಉಪನ್ಯಾಸಕರಾದ ರಾಘವೇಂದ್ರರವರು ನೆರವೇರಿಸಿಕೊಟ್ಟರು

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಭಿಜಿತ್, ಅರಣ್ಯ ಅಧಿಕಾರಿಗಳಾದ ಗೋಪಾಲ್ ಹಾಗು ರಾಜೇಂದ್ರರವರು ಉಪಸ್ಥಿತರಿದ್ದರು

ವಿಧಾರ್ಥಿಗಳು ಕುದುರೆಮುಖದ ಶೋಲಾ ಅರಣ್ಯದ ಸೊಬಗನ್ನು ಕಣ್ತುಂಬಿಕೊಂಡು ಆನಂದಿಸಿದರು









ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...