Wednesday, December 7, 2016

ಡಾII ಶಾಂತಾರಾಮ್ ಪೈರವರಿಂದ ಸಂವಾದ ಕಾರ್ಯಕ್ರಮ

ನವೆಂಬರ್ 30,2016 ರಂದು ಮಣಿಪಾಲ್ ಅಕೆಡೆಮಿಯ ಡಾII ಶಾಂತಾರಾಮ್ ಪೈ ರವರು ಕಾಲೇಜಿನ ವಿಧಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ವಿಧಾರ್ಥಿಗಳ ಜೊತೆ ಮಾತನಾಡಿದ ಅವರು ಗುರಿಯನ್ನು ಸಾಧಿಸುವಿಕೆಗೆ ಬೇಕಾದ ತಯಾರಿಗಳ ಬಗ್ಗೆ ಕಿವಿಮಾತುಗಳನ್ನು ಹೇಳಿದರು. ಸಿಬ್ಬಂದಿಗಳ ಜೊತೆ ಸಂವಾದದಲ್ಲಿ ಉತ್ತಮ ಶಿಕ್ಷಕನಲ್ಲಿರಬೇಕಾದ ಗುಣಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು


ಸಹ್ಯಾದ್ರಿ ಉತ್ಸವ

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜಿನಿಂದ ಹಲವು ವಿಧಾರ್ಥಿಗಳು ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.ಉತ್ಸವದ ಆರಂಭದ ದಿನ ನಡೆದ ಮೆರವಣಿಗೆಯಲ್ಲಿ ಕಾಲೇಜಿನ ವಿಧಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು


ತಾಲ್ ಸೈನಿಕ್ ಕ್ಯಾಂಪ್


ಭಾಷಣ ಹಾಗು ಪ್ರಬಂಧ ಸ್ಪರ್ಧೆ

ದಿನಾಂಕ 24-09-2016 ರಂದು ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಗಾಂಧೀಜಿ ಬಗೆಗಿನ ವಿಷಯಗಳ ಭಾಷಣ ಸ್ಪರ್ಧೆ ಹಾಗು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು .ಶೃಂಗೇರಿಯ ತಾಲೂಕಿನ ವಿವಿಧ ಕಾಲೇಜುಗಳ ಸ್ಪರ್ಧಾಳುಗಳು ಭಾಗವಹಿಸಿ ವಿಷಯವನ್ನು ಅರ್ಥಪೂರ್ಣವಾಗಿ ಮಂಡಿಸಿದರು

Special theory of relativity ಉಪನ್ಯಾಸ

ಕಾಲೇಜಿನಲ್ಲಿ ಸೆಪ್ಟೆಂಬರ್ 30,2016 ರಂದು ''Special theory of relativity" ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಶೃಂಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫಿಸಿಕ್ಸ್ ವಿಭಾಗದ ಶಿಕ್ಷಕರಾದ ಶ್ರೀಯುತ ಆದಿತ್ಯರವರು ನಡೆಸಿಕೊಟ್ಟರು


ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರ

ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರ, ಸ್ವಾಮಿ ವಿವೇಕಾನಂದರ ಹಾಗು ಗಾಂಧಿ ಅದ್ಯಯನ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮವನ್ನು  ದಿನಾಂಕ 01-10-2016 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು

ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯಶ್ರೀ ಸ್ವಾಮೀ ಜಿತಕಮಾನಂದಜೀಯವರು ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರವನ್ನು ಉದ್ಘಾಟಿಸಿ ಶೀಲ ನಿರ್ಮಾಣದ ಶಿಕ್ಷಣ ಇಂದು ಬೇಕಾಗಿದ್ದು,ನಿಜವಾದ ವಿಧ್ಯಾಭ್ಯಾಸದ ಮೂಲತತ್ವ ವ್ಯಕ್ತಿಯನ್ನು ದೈವತ್ವಕ್ಕೇರಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು







ಈ ಸಂದರ್ಭದಲ್ಲಿ 2015-16 ರ ಸಾಲಿನ "ಭಾಮತಿ" ಪುಸ್ತಕ ಬಿಡುಗಡೆಯನ್ನು  ಸ್ವಾಮಿ ಜಿತಕಾಮಾನಂದಜೀ ಹಾಗು ಸ್ವಾಮಿ ವೀರೇಶಾನಂದಜೀ ಅವರು ನೆರೆವೇರಿಸದರು


ಮೊದಲನೆಯ ದಿನದ ಗೋಷ್ಠಿಯಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯಶ್ರೀ ವಿರೆಶನಂದಜೀಯವರು 'ಯುವ ಜನತೆಗೆ ವಿವೇಕಾನಂದರ ಸಂದೇಶಗಳು' ಎಂಬ ವಿಚಾರದ ಕುರಿತು ಮಾತನಾಡಿ ಜೀವನದಲ್ಲಿ ಗುರುಗಿಂತ ದಾರಿ ಮುಖ್ಯ, ನ್ಯಾಯ ಮಾರ್ಗದ ಸೋಲು ಅನ್ಯಾಯ ಮಾರ್ಗದ ಗೆಲುವಿಗಿಂತ ಹೆಚ್ಚು ನೈತಿಕ ಎಂದರು


ಎರಡನೇ ಗೋಷ್ಠಿಯಲ್ಲಿ ಬೆಂಗಳೂರಿನ ಚಿಂತಕರಾದ ಡಾII ಎಸ್ ರಂಗನಾಥ್ 'ನವ ಸಮಾಜಕ್ಕೆ ನೈತಿಕ ಲೇಪನ' ಎಂಬ ವಿಚಾರದ ಕುರಿತು ಮಾತನಾಡಿ ಆಧುನಿಕತೆಗೆ ನೈತಿಕ ಚೌಕಟ್ಟುಗಳನ್ನು ಒಳಪಡಿಸಬೇಕಾದ ತುರ್ತಿದೆ ಎಂದರು

ಮೂರನೇ ಗೋಷ್ಠಿಯಲ್ಲಿ ಶಿವಮೊಗ್ಗದ ಚಿಂತಕರಾದ ಶ್ರೀ ಜೇ ಎಸ್ ನಟೇಶ್ 'ಮಂಕುತಿಮ್ಮನ ಕಗ್ಗ -ಜೀವನ ಸಂದೇಶಗಳು 'ವಿಚಾರದ ಕುರಿತು ಮಾತನಾಡಿ ನಮ್ಮ ಸಂಸ್ಕೃತಿ -ಸಂಪ್ರದಾಯಗಳು ಗಂಭೀರ ಬದುಕನ್ನು ಕಟ್ಟುತ್ತವೆ ಎಂದರು

ಕಾರ್ಯಕ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ 'ನಮ್ಮ ಸಂಸ್ಕೃತಿ -ನಮ್ಮ ಪರಂಪರೆ' ವಿಚಾರದ ಕುರಿತು ಸಿದ್ದಾಪುರದ ಸಾಹಿತಿ ಮತ್ತು ಕೃಷಿಕರಾದ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ ಆಧುನಿಕ ಪ್ರಲೋಭೆಗಳು ನಮ್ಮ ತನವನ್ನು ಕಸಿಯುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು

ಎರಡನೇ ಗೋಷ್ಠಿಯಲ್ಲಿ ಗಾಂಧಿ ಅದ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಏನ್ ಎಸ್ ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಡಾII ಕಾಳ ಚೆನ್ನೇಗೌಡ 'ಗಾಂಧಿ ವಿಚಾರಗಳ ಪ್ರಸ್ತುತತೆ' ಎಂಬ ವಿಷಯದ ಕುರಿತು ಮಾತನಾಡಿ ಗಾಂದಿಯ ಅಪ್ರಸ್ತುತತೆ ಬಗೆಗೆ ಕಳವಳ ವ್ಯಕ್ತಪಡಿಸಿದರು

ಮೂರನೇ ಗೋಷ್ಟಿಯಲ್ಲಿ ವಿಜಯಪುರ ಡಾII ಎಂ ಬಿ ದಿಲ್ಷಾದ್ ರವರು 'ಶಿಶುನಾಳ ಗಿತೆಯಲ್ಲಿ ಜೀವನ ಮೌಲ್ಯಗಳು' ಎಂಬ ವಿಚಾರದ ಕುರಿತು ಮಾತನಾಡಿ ,ಗೀತೆಗಳ ಮೂಲಖ ವಿಧಾರ್ಥಿಗಳನ್ನು ರಂಜಿಸಿದರು

ಎರಡು ದಿನಗಳ ಶಿಬಿರವು ಪ್ರಾಂಶುಪಾಲರಾದ ಡಾII ದೇವಿದಾಸ್ ಎಸ್ ನಾಯ್ಕ್ರವರ ಅಧ್ಯಕ್ಷತೆಯ ಸಮಾರೋಪ ಸಮಾರಂಭದ ಬಳಿಕ ತೆರೆ ಕಂಡಿತು .ಶಿಬಿರದಲ್ಲಿ ಕಾಲೇಜಿನ ವಿಧ್ಯಾರ್ತಿಗಳು ,ಏನ್ ಸಿ ಸಿ ಕೆಡೆಟ್ ಗಳು .ಏನ್ ಎಸ್ ಎಸ್ ಸ್ವಯಂ ಸೇವಕರುಗಳು ಭಾಗವಹಿಸಿದ್ದರು







ವನ್ಯ ಜೀವಿ ವಿಭಾಗದ ವಲಯ ಮಟ್ಟದ ಟ್ರೋಫಿ

62 ನೇ ವನ್ಯಜೀವಿ ವಿಭಾಗದ ಅಂಗವಾಗಿ ಕಾರ್ಕಳದಲ್ಲಿ ನಡೆದ ಪದವಿ ವಿಭಾಗದ  ವಲಯ ಮಟ್ಟದ ಚರ್ಚಾ ಸ್ಪರ್ದೆಯಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿ ಪ್ರಮೋದ್ ಭಾರದ್ವಾಜ್ ಪ್ರಥಮ ಸ್ಥಾನವನ್ನು ಹಾಗು ಸ್ವಾಗತ್ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ
ಪ್ರಾಂಶುಪಾಲರು ಇವರನ್ನು ಅಭಿನಂದಿಸಿದರು


Thursday, September 15, 2016

62 ನೇ ವನ್ಯ ಜೀವಿ ಸಪ್ತಾಹದ ಸ್ಪರ್ಧೆಗಳು

ದಿನಾಂಕ 15-09-2016 ರಂದು ಜೆಸಿಬಿಎಂ ಕಾಲೇಜು ಹಾಗು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೆರೆಕಟ್ಟೆ ವನ್ಯಜೀವಿ ವಿಭಾಗದ ವತಿಯಿಂದ  62 ನ ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರಾಥಮಿಕ,ಪ್ರೌಡ ಶಾಲಾ,ಪದವಿ ಪೂರ್ವ ಹಾಗು ಪದವಿ ವಿಭಾಗದ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು

ಪರಿಸರದ ಚಿತ್ರ ಬಿಡಿಸುವುದು, ವನ್ಯ ಪ್ರಾಣಿಗಳ ಚಿತ್ರಗಳನ್ನು ಗುರುತಿಸುವುದು, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಶೃಂಗೇರಿ ತಾಲೂಕಿನ ವಿವಿಧ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು

ಕೆರೆಕಟ್ಟೆ ವಲಯ ಅರಣ್ಯ ಅಧಿಕಾರಿ ಗೋಪಾಲ್ ಹಾಗು ಅವರ ಸಿಬ್ಬಂದಿಗಳು ಕಾರ್ಯಕ್ರಮದ ಆಯೋಜನೆಯನ್ನು ಮಾಡಿದ್ದರು. ಉಪನ್ಯಾಸಕರಾದ ರಾಘವೇಂದ್ರ, ಅಭಿಜಿತ್ ಕಾರ್ಯಕ್ರಮಗಳ ನಿರ್ವಹಣೆಯನ್ನು ಮಾಡಿದರು. ಸ್ಪರ್ಧೆಗಳ ತೀರ್ಪುಗಾರರಾಗಿ ಡಾ!! ಕುಮಾರಸ್ವಾಮಿ ಉಡುಪ, ಶ್ರೀ ದೇವದಾಸ್, ಪ್ರಸನ್ನ ಹಾಗು ಕುಮಾರಿ ಮೇಘಾನರವರು ಕಾರ್ಯ ನಿರ್ವಹಿಸಿದರು

ಈ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ನಶಿಸುತ್ತಿರುವ ಪರಿಸರವನ್ನು ಉಳಿಸುವ ಮುಂದಿನ ಪೀಳಿಗೆಯ ಆಶಾಕಿರಣಗಳಂತೆ ಕಂಡರು



















ಗುರುನಮನ

ದಿನಾಂಕ 07-09 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗುರುನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮಕ್ಕೆ ಮಹಾರಾಣಿ ಕಾಲೇಜಿನ ಅಧ್ಯಾಪಕಿಯದಂತಹ ಡಾII ಆಶಾದೇವಿ ಯವರು ಅಗಮಿಸಿ ದತ್ತಿ ಉಪನ್ಯಾಸ ನೀಡಿದರು

ತಮ್ಮ ಉಪನ್ಯಾಸದಲ್ಲಿ ಅವರು "ವಿದ್ಯಾರ್ಥಿಗಳ ಹಾಗು ಗುರುಗಳ ಸಂಬಂಧ ತಾಯಿ-ಮಕ್ಕಳ ಸಂಬಂಧವಿದ್ದಂತೆ. ಹೇಗೆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲವೋ ಹಾಗೆ ಗುರುವಿನ ಋಣವನ್ನು ವಿದ್ಯಾರ್ಥಿಯಿಂದ ತೀರಿಸಲು ಸಾಧ್ಯವಿಲ್ಲ. ಗುರುವಿಗೆ ಗೌರವವನ್ನು ನೀಡುವುದು ವಿದ್ಯಾರ್ಥಿಗಳ ಕರ್ತವ್ಯ " ಎಂದು ನುಡಿದರು



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೆಂಕಟೇಶ್ ರವರು ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಚಾರ್ಯರಾದ ದೇವಿದಾಸ್ ಎಸ್. ನಾಯ್ಕ್ ರವರು ಉಪಸ್ಥಿತಿರಿದ್ದರು

ರೋಟ್ರಾಕ್ಟ ಸಂಘದ ಉದ್ಘಾಟನಾ ಕಾರ್ಯಕ್ರಮ

ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರೋಟ್ರಾಕ್ಟ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 03ರಂದು ಹಮ್ಮಿಕೊಳ್ಳಲಾಗಿತ್ತು

ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗು ಮಲೆನಾಡು ವಿದ್ಯಾಸಂಸ್ಥೆ ಯ ಅಧ್ಯಕ್ಷರಾದ T.D ರಾಜೇಗೌಡ್ರು ಆಗಮಿಸಿದ್ದರು

"ವಿದ್ಯಾರ್ಥಿಗಳು ರಾಜಕೀಯದಲ್ಲಿ ತೊಡಗಿಸಿಕೊಲ್ಲುವುದಕ್ಕಿಂತ, ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಆಗ ಸಮಾಜದ ಅಭಿವೃದ್ಧಿಯಾಗುತ್ತದೆ" ಎಂದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಸೇವೆಯ ಮಹತ್ವವನ್ನು ತಿಳಿಸಿದರು ಹಾಗು ಮುಂದಿನ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು




NSS ಗೀತೆಗಳ ಗಾಯನ ತರಬೇತಿ

ಸೆಪ್ಟೆಂಬರ್ 13 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಎನ್.ಎಸ್.ಎಸ್ ಗೀತೆಗಳ ಗಾಯನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇದಕ್ಕೆ ತರಬೇತುದಾರರಾಗಿ ನಾಗರಾಜ ರಾವ್ ರವರು ಆಗಮಿಸಿದ್ದರು. ಸ್ವಯಂ ಸೇವಕರಿಗೆ ಹಾಡಿನ ಧಾಟಿಯನ್ನು ಹಾಗು ಅದರ ಅರ್ಥವನ್ನು ಅತ್ಯಂತ ಸುಂದರವಾಗಿ ಹೇಳಿಕೊಟ್ಟರು




Sunday, August 28, 2016

ಗ್ರಂಥಾಲಯ ದಿನಾಚರಣೆ

ದಿನಾಂಕ 27-08-2016 ರಂದು ಗ್ರಂಥಾಲಯ ದಿನಾಚರಣೆಯನ್ನು ಜೆ ಸಿ ಬಿ ಎಂ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ವಿಶ್ವವಿದ್ಯಾಲಯದ ಗ್ರಂಥ ಪಾಲಕರಾದ ರೇಖಾ ಪೈ ರವರು ಮಾತನಾಡಿ ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಜೆ.ಸಿ.ಬಿ.ಎಂ ಕಾಲೇಜಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.ಈ ಸಂಧರ್ಭದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಣೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು

ಅಧ್ಯಕ್ಷತೆಯನ್ನು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾII ಕೆ.ಪಿ. ಪ್ರಕಾಶ್ ರವರು ವಹಿಸಿದ್ದರು, ಗ್ರಂಥಪಾಲಕರಾದ ಪ್ರಸನ್ನ ಸ್ವಾಗತಿಸಿ,ವಂದಿಸಿದರು

ಏನ್ ಎಸ್ ಎಸ್ ಉದ್ಘಾಟನಾ ಸಮಾರಂಭ

ದಿನಾಂಕ 26-08-16 ರಂದು ಜೆ ಸಿ ಬಿ ಎಂ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾII ದೇವಿದಾಸ್ ನಾಯ್ಕ್ ರವರು ವಹಿಸಿದ್ದರು


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುವೆಂಪು ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಕುಂದನ್ ಬಸವರಾಜ್ ರವರು ಮಾತನಾಡಿ ಜೆ ಸಿ ಬಿ ಎಂ ಕಾಲೇಜಿನ ಎನ್.ಎಸ್ ಎಸ್ ಗೆ ರಾಜ್ಯದಲ್ಲೇ ಅತ್ಯುತ್ತಮ ಹೆಸರಿದೆ, ಈ ಒಂದು ಶ್ರೇಯ ಇನ್ನೂ ಸಹ ಮುಂದುವರಿಯಲಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪ ರವಿ ಮತ್ತು ವಿಧ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದನಂತಹ  ಯಶವಂತಿ. ಎಸ್. ಸಾಲಿಯಾನ್  ಹಾಗು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದಂತಹ ಎನ್.ಎಚ್.ಲಕ್ಷ್ಮೀ ನಾರಾಯಣ್ ಹಾಗು ಎ.ಜಿ.ಪ್ರಶಾಂತ್ ರವರು ಉಪಸ್ಥಿತರಿದ್ದರು.

Saturday, August 20, 2016

Felicitation to Lt.Dr.ES Kumaraswami udupa

NCC officer of Sri jcbm clg sringeri Lt.Dr.E.S Kumaraswami udupa has been awarded with chief minister commendation letter

On behalf of this occasion all the ncc cadets of our college have  organised a program to honour him.This was held on 15 august
Principal Dr.Devidas naik, PU principal A.G Prashanth. and Yashwanti Saliyana.student welfare officer witnessed this program of felicitation
Lt.Dr.ES Kumaraswami udupa  thanked for all those who have supported him and also expressed his aim to get the best institution award

Monday, August 15, 2016

70 ನೇ ಸ್ವಾತಂತ್ರೋತ್ಸವ

70 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು

ಪ್ರಾಂಶುಪಾಲರಾದ ಡಾ ದೇವಿದಾಸ್ ನಾಯಕ್ ರವರು ಧ್ವಜಾರೂಹಣವನ್ನು ನೆರವೇರಿಸಿದರು

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಏನ್ ಎಸ್ ಎಸ್ ಮತ್ತು ಏನ್ ಸಿ ಸಿ ಕೆಡೆಟ್ ಗಳು ಭಾಗವಹಿಸಿದ್ದರು. ಲೆಫ್ಟಿನೆಂಟ್ ಡಾ ಕುಮಾರಸ್ವಾಮಿ ಉಡುಪ ಸೇರಿದಂತೆ ಏನ್ ಎಸ್ ಎಸ್ ಮುಖ್ಯಸ್ಥರಾದ ಶ್ರೀಯುತ ಏ ಜಿ ಪ್ರಶಾಂತ್, ಪ್ರೊ ಲಕ್ಷೀ ನಾರಾಯಣ ಹಾಗು ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಕಾಯಕ್ರಮದಲ್ಲಿ ಭಾಗವಹಿಸಿದ್ದರು

ಈ ಸುಸಂಧರ್ಭದ ದಿವಸ ಕಾಲೇಜಿನ ಆವರಣದಲ್ಲಿ  ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಲಾಗಿತ್ತು. ದೇವಿದಾಸ್ ನಾಯಕ್ ರವರು ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು





















ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...