ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯಶ್ರೀ ಸ್ವಾಮೀ ಜಿತಕಮಾನಂದಜೀಯವರು ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರವನ್ನು ಉದ್ಘಾಟಿಸಿ ಶೀಲ ನಿರ್ಮಾಣದ ಶಿಕ್ಷಣ ಇಂದು ಬೇಕಾಗಿದ್ದು,ನಿಜವಾದ ವಿಧ್ಯಾಭ್ಯಾಸದ ಮೂಲತತ್ವ ವ್ಯಕ್ತಿಯನ್ನು ದೈವತ್ವಕ್ಕೇರಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ 2015-16 ರ ಸಾಲಿನ "ಭಾಮತಿ" ಪುಸ್ತಕ ಬಿಡುಗಡೆಯನ್ನು ಸ್ವಾಮಿ ಜಿತಕಾಮಾನಂದಜೀ ಹಾಗು ಸ್ವಾಮಿ ವೀರೇಶಾನಂದಜೀ ಅವರು ನೆರೆವೇರಿಸದರು
ಮೊದಲನೆಯ ದಿನದ ಗೋಷ್ಠಿಯಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯಶ್ರೀ ವಿರೆಶನಂದಜೀಯವರು 'ಯುವ ಜನತೆಗೆ ವಿವೇಕಾನಂದರ ಸಂದೇಶಗಳು' ಎಂಬ ವಿಚಾರದ ಕುರಿತು ಮಾತನಾಡಿ ಜೀವನದಲ್ಲಿ ಗುರುಗಿಂತ ದಾರಿ ಮುಖ್ಯ, ನ್ಯಾಯ ಮಾರ್ಗದ ಸೋಲು ಅನ್ಯಾಯ ಮಾರ್ಗದ ಗೆಲುವಿಗಿಂತ ಹೆಚ್ಚು ನೈತಿಕ ಎಂದರು
ಎರಡನೇ ಗೋಷ್ಠಿಯಲ್ಲಿ ಬೆಂಗಳೂರಿನ ಚಿಂತಕರಾದ ಡಾII ಎಸ್ ರಂಗನಾಥ್ 'ನವ ಸಮಾಜಕ್ಕೆ ನೈತಿಕ ಲೇಪನ' ಎಂಬ ವಿಚಾರದ ಕುರಿತು ಮಾತನಾಡಿ ಆಧುನಿಕತೆಗೆ ನೈತಿಕ ಚೌಕಟ್ಟುಗಳನ್ನು ಒಳಪಡಿಸಬೇಕಾದ ತುರ್ತಿದೆ ಎಂದರು
ಮೂರನೇ ಗೋಷ್ಠಿಯಲ್ಲಿ ಶಿವಮೊಗ್ಗದ ಚಿಂತಕರಾದ ಶ್ರೀ ಜೇ ಎಸ್ ನಟೇಶ್ 'ಮಂಕುತಿಮ್ಮನ ಕಗ್ಗ -ಜೀವನ ಸಂದೇಶಗಳು 'ವಿಚಾರದ ಕುರಿತು ಮಾತನಾಡಿ ನಮ್ಮ ಸಂಸ್ಕೃತಿ -ಸಂಪ್ರದಾಯಗಳು ಗಂಭೀರ ಬದುಕನ್ನು ಕಟ್ಟುತ್ತವೆ ಎಂದರು
ಕಾರ್ಯಕ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ 'ನಮ್ಮ ಸಂಸ್ಕೃತಿ -ನಮ್ಮ ಪರಂಪರೆ' ವಿಚಾರದ ಕುರಿತು ಸಿದ್ದಾಪುರದ ಸಾಹಿತಿ ಮತ್ತು ಕೃಷಿಕರಾದ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ ಆಧುನಿಕ ಪ್ರಲೋಭೆಗಳು ನಮ್ಮ ತನವನ್ನು ಕಸಿಯುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು
ಎರಡನೇ ಗೋಷ್ಠಿಯಲ್ಲಿ ಗಾಂಧಿ ಅದ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಏನ್ ಎಸ್ ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಡಾII ಕಾಳ ಚೆನ್ನೇಗೌಡ 'ಗಾಂಧಿ ವಿಚಾರಗಳ ಪ್ರಸ್ತುತತೆ' ಎಂಬ ವಿಷಯದ ಕುರಿತು ಮಾತನಾಡಿ ಗಾಂದಿಯ ಅಪ್ರಸ್ತುತತೆ ಬಗೆಗೆ ಕಳವಳ ವ್ಯಕ್ತಪಡಿಸಿದರು
ಮೂರನೇ ಗೋಷ್ಟಿಯಲ್ಲಿ ವಿಜಯಪುರ ಡಾII ಎಂ ಬಿ ದಿಲ್ಷಾದ್ ರವರು 'ಶಿಶುನಾಳ ಗಿತೆಯಲ್ಲಿ ಜೀವನ ಮೌಲ್ಯಗಳು' ಎಂಬ ವಿಚಾರದ ಕುರಿತು ಮಾತನಾಡಿ ,ಗೀತೆಗಳ ಮೂಲಖ ವಿಧಾರ್ಥಿಗಳನ್ನು ರಂಜಿಸಿದರು
ಎರಡು ದಿನಗಳ ಶಿಬಿರವು ಪ್ರಾಂಶುಪಾಲರಾದ ಡಾII ದೇವಿದಾಸ್ ಎಸ್ ನಾಯ್ಕ್ರವರ ಅಧ್ಯಕ್ಷತೆಯ ಸಮಾರೋಪ ಸಮಾರಂಭದ ಬಳಿಕ ತೆರೆ ಕಂಡಿತು .ಶಿಬಿರದಲ್ಲಿ ಕಾಲೇಜಿನ ವಿಧ್ಯಾರ್ತಿಗಳು ,ಏನ್ ಸಿ ಸಿ ಕೆಡೆಟ್ ಗಳು .ಏನ್ ಎಸ್ ಎಸ್ ಸ್ವಯಂ ಸೇವಕರುಗಳು ಭಾಗವಹಿಸಿದ್ದರು















No comments:
Post a Comment