Wednesday, December 7, 2016

ಡಾII ಶಾಂತಾರಾಮ್ ಪೈರವರಿಂದ ಸಂವಾದ ಕಾರ್ಯಕ್ರಮ

ನವೆಂಬರ್ 30,2016 ರಂದು ಮಣಿಪಾಲ್ ಅಕೆಡೆಮಿಯ ಡಾII ಶಾಂತಾರಾಮ್ ಪೈ ರವರು ಕಾಲೇಜಿನ ವಿಧಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ವಿಧಾರ್ಥಿಗಳ ಜೊತೆ ಮಾತನಾಡಿದ ಅವರು ಗುರಿಯನ್ನು ಸಾಧಿಸುವಿಕೆಗೆ ಬೇಕಾದ ತಯಾರಿಗಳ ಬಗ್ಗೆ ಕಿವಿಮಾತುಗಳನ್ನು ಹೇಳಿದರು. ಸಿಬ್ಬಂದಿಗಳ ಜೊತೆ ಸಂವಾದದಲ್ಲಿ ಉತ್ತಮ ಶಿಕ್ಷಕನಲ್ಲಿರಬೇಕಾದ ಗುಣಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು


ಸಹ್ಯಾದ್ರಿ ಉತ್ಸವ

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜಿನಿಂದ ಹಲವು ವಿಧಾರ್ಥಿಗಳು ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.ಉತ್ಸವದ ಆರಂಭದ ದಿನ ನಡೆದ ಮೆರವಣಿಗೆಯಲ್ಲಿ ಕಾಲೇಜಿನ ವಿಧಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು


ತಾಲ್ ಸೈನಿಕ್ ಕ್ಯಾಂಪ್


ಭಾಷಣ ಹಾಗು ಪ್ರಬಂಧ ಸ್ಪರ್ಧೆ

ದಿನಾಂಕ 24-09-2016 ರಂದು ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಗಾಂಧೀಜಿ ಬಗೆಗಿನ ವಿಷಯಗಳ ಭಾಷಣ ಸ್ಪರ್ಧೆ ಹಾಗು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು .ಶೃಂಗೇರಿಯ ತಾಲೂಕಿನ ವಿವಿಧ ಕಾಲೇಜುಗಳ ಸ್ಪರ್ಧಾಳುಗಳು ಭಾಗವಹಿಸಿ ವಿಷಯವನ್ನು ಅರ್ಥಪೂರ್ಣವಾಗಿ ಮಂಡಿಸಿದರು

Special theory of relativity ಉಪನ್ಯಾಸ

ಕಾಲೇಜಿನಲ್ಲಿ ಸೆಪ್ಟೆಂಬರ್ 30,2016 ರಂದು ''Special theory of relativity" ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಶೃಂಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫಿಸಿಕ್ಸ್ ವಿಭಾಗದ ಶಿಕ್ಷಕರಾದ ಶ್ರೀಯುತ ಆದಿತ್ಯರವರು ನಡೆಸಿಕೊಟ್ಟರು


ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರ

ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರ, ಸ್ವಾಮಿ ವಿವೇಕಾನಂದರ ಹಾಗು ಗಾಂಧಿ ಅದ್ಯಯನ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮವನ್ನು  ದಿನಾಂಕ 01-10-2016 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು

ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯಶ್ರೀ ಸ್ವಾಮೀ ಜಿತಕಮಾನಂದಜೀಯವರು ನೈತಿಕ-ಆಧ್ಯಾತ್ಮಿಕ ಚಿಂತನ ಶಿಬಿರವನ್ನು ಉದ್ಘಾಟಿಸಿ ಶೀಲ ನಿರ್ಮಾಣದ ಶಿಕ್ಷಣ ಇಂದು ಬೇಕಾಗಿದ್ದು,ನಿಜವಾದ ವಿಧ್ಯಾಭ್ಯಾಸದ ಮೂಲತತ್ವ ವ್ಯಕ್ತಿಯನ್ನು ದೈವತ್ವಕ್ಕೇರಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು







ಈ ಸಂದರ್ಭದಲ್ಲಿ 2015-16 ರ ಸಾಲಿನ "ಭಾಮತಿ" ಪುಸ್ತಕ ಬಿಡುಗಡೆಯನ್ನು  ಸ್ವಾಮಿ ಜಿತಕಾಮಾನಂದಜೀ ಹಾಗು ಸ್ವಾಮಿ ವೀರೇಶಾನಂದಜೀ ಅವರು ನೆರೆವೇರಿಸದರು


ಮೊದಲನೆಯ ದಿನದ ಗೋಷ್ಠಿಯಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯಶ್ರೀ ವಿರೆಶನಂದಜೀಯವರು 'ಯುವ ಜನತೆಗೆ ವಿವೇಕಾನಂದರ ಸಂದೇಶಗಳು' ಎಂಬ ವಿಚಾರದ ಕುರಿತು ಮಾತನಾಡಿ ಜೀವನದಲ್ಲಿ ಗುರುಗಿಂತ ದಾರಿ ಮುಖ್ಯ, ನ್ಯಾಯ ಮಾರ್ಗದ ಸೋಲು ಅನ್ಯಾಯ ಮಾರ್ಗದ ಗೆಲುವಿಗಿಂತ ಹೆಚ್ಚು ನೈತಿಕ ಎಂದರು


ಎರಡನೇ ಗೋಷ್ಠಿಯಲ್ಲಿ ಬೆಂಗಳೂರಿನ ಚಿಂತಕರಾದ ಡಾII ಎಸ್ ರಂಗನಾಥ್ 'ನವ ಸಮಾಜಕ್ಕೆ ನೈತಿಕ ಲೇಪನ' ಎಂಬ ವಿಚಾರದ ಕುರಿತು ಮಾತನಾಡಿ ಆಧುನಿಕತೆಗೆ ನೈತಿಕ ಚೌಕಟ್ಟುಗಳನ್ನು ಒಳಪಡಿಸಬೇಕಾದ ತುರ್ತಿದೆ ಎಂದರು

ಮೂರನೇ ಗೋಷ್ಠಿಯಲ್ಲಿ ಶಿವಮೊಗ್ಗದ ಚಿಂತಕರಾದ ಶ್ರೀ ಜೇ ಎಸ್ ನಟೇಶ್ 'ಮಂಕುತಿಮ್ಮನ ಕಗ್ಗ -ಜೀವನ ಸಂದೇಶಗಳು 'ವಿಚಾರದ ಕುರಿತು ಮಾತನಾಡಿ ನಮ್ಮ ಸಂಸ್ಕೃತಿ -ಸಂಪ್ರದಾಯಗಳು ಗಂಭೀರ ಬದುಕನ್ನು ಕಟ್ಟುತ್ತವೆ ಎಂದರು

ಕಾರ್ಯಕ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ 'ನಮ್ಮ ಸಂಸ್ಕೃತಿ -ನಮ್ಮ ಪರಂಪರೆ' ವಿಚಾರದ ಕುರಿತು ಸಿದ್ದಾಪುರದ ಸಾಹಿತಿ ಮತ್ತು ಕೃಷಿಕರಾದ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ ಆಧುನಿಕ ಪ್ರಲೋಭೆಗಳು ನಮ್ಮ ತನವನ್ನು ಕಸಿಯುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು

ಎರಡನೇ ಗೋಷ್ಠಿಯಲ್ಲಿ ಗಾಂಧಿ ಅದ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಏನ್ ಎಸ್ ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಡಾII ಕಾಳ ಚೆನ್ನೇಗೌಡ 'ಗಾಂಧಿ ವಿಚಾರಗಳ ಪ್ರಸ್ತುತತೆ' ಎಂಬ ವಿಷಯದ ಕುರಿತು ಮಾತನಾಡಿ ಗಾಂದಿಯ ಅಪ್ರಸ್ತುತತೆ ಬಗೆಗೆ ಕಳವಳ ವ್ಯಕ್ತಪಡಿಸಿದರು

ಮೂರನೇ ಗೋಷ್ಟಿಯಲ್ಲಿ ವಿಜಯಪುರ ಡಾII ಎಂ ಬಿ ದಿಲ್ಷಾದ್ ರವರು 'ಶಿಶುನಾಳ ಗಿತೆಯಲ್ಲಿ ಜೀವನ ಮೌಲ್ಯಗಳು' ಎಂಬ ವಿಚಾರದ ಕುರಿತು ಮಾತನಾಡಿ ,ಗೀತೆಗಳ ಮೂಲಖ ವಿಧಾರ್ಥಿಗಳನ್ನು ರಂಜಿಸಿದರು

ಎರಡು ದಿನಗಳ ಶಿಬಿರವು ಪ್ರಾಂಶುಪಾಲರಾದ ಡಾII ದೇವಿದಾಸ್ ಎಸ್ ನಾಯ್ಕ್ರವರ ಅಧ್ಯಕ್ಷತೆಯ ಸಮಾರೋಪ ಸಮಾರಂಭದ ಬಳಿಕ ತೆರೆ ಕಂಡಿತು .ಶಿಬಿರದಲ್ಲಿ ಕಾಲೇಜಿನ ವಿಧ್ಯಾರ್ತಿಗಳು ,ಏನ್ ಸಿ ಸಿ ಕೆಡೆಟ್ ಗಳು .ಏನ್ ಎಸ್ ಎಸ್ ಸ್ವಯಂ ಸೇವಕರುಗಳು ಭಾಗವಹಿಸಿದ್ದರು







ವನ್ಯ ಜೀವಿ ವಿಭಾಗದ ವಲಯ ಮಟ್ಟದ ಟ್ರೋಫಿ

62 ನೇ ವನ್ಯಜೀವಿ ವಿಭಾಗದ ಅಂಗವಾಗಿ ಕಾರ್ಕಳದಲ್ಲಿ ನಡೆದ ಪದವಿ ವಿಭಾಗದ  ವಲಯ ಮಟ್ಟದ ಚರ್ಚಾ ಸ್ಪರ್ದೆಯಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿ ಪ್ರಮೋದ್ ಭಾರದ್ವಾಜ್ ಪ್ರಥಮ ಸ್ಥಾನವನ್ನು ಹಾಗು ಸ್ವಾಗತ್ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ
ಪ್ರಾಂಶುಪಾಲರು ಇವರನ್ನು ಅಭಿನಂದಿಸಿದರು


ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...