ದಿನಾಂಕ
11-03-2017 ರಂದು ಕಾಲೇಜಿನಲ್ಲಿ ವಿಜ್ಞಾನ ಸಂಘದಿಂದ
ವಿಜ್ಞಾನ ಉತ್ಸವ 2017 ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಡಾ II ಬಿ.ಎನ್. ಸುರೇಶ್ , ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್
ಇಂಜಿನಿಯರಿಂಗ್
(INAE) ಮತ್ತು ವಿಜ್ಞಾನಿಗಳು,ಭಾರತೀಯ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆ
(ISRO) ಇವರು ಆಗಮಿಸಿದ್ದರು
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ II ಬಿ.ಎನ್. ಸುರೇಶ್ ರವರು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯರ ಸಾಧನೆ, ಹಾಳಾಗುತ್ತಿರುವ ಪರಿಸರ, ಇಂದಿನ ಯುಗದಲ್ಲಿ ಉಪಗ್ರಹಗಳ ಅವಶ್ಯಕತೆ, ಅವುಗಳ ಮಾಹಿತಿಯ ಯಶಸ್ವೀ ಬಳಕೆಯ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದರು
ಮಧ್ಯಾನ್ಹ ನಡೆದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರವನ್ನು ಪ್ರಾಣಿ ಶಾಸ್ತ್ರ ಉಪನ್ಯಾಸಕರಾದ ಕೇಶವ ಮೂರ್ತಿಯವರು ನಡೆಸಿಕೊಟ್ಟರು
ಈ ವಿಜ್ಞಾನ ಉತ್ಸವ ಕಾರ್ಯಕ್ರದಲ್ಲಿ
ಡಾII ಕಲಾಂ ನುಡಿಚಿತ್ರ ನಮನ ಎಂಬ ವಿಶ್ಶಿಷ್ಟ ನುಡಿಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಇದರ ಜೊತೆಗೆ ಅರುನಾಚಲ್ ಹೆಬ್ಬಾರ್ ರವರಿಂದ ಜೀವ ವೈವಿಧ್ಯತೆ ಛಾಯಾ ಚಿತ್ರ ಪ್ರದರ್ಶನವನ್ನುಕೂಡಾ ಏರ್ಪಡಿಸಲಾಗಿತ್ತು. ವಿಜ್ಞಾನ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀನಿವಾಸ್ ಮೂರ್ತಿ, ಪ್ರಗತಿಪರ ಕೃಷಿಕರು,ಶೃಂಗೇರಿ ಇವರು ಭಾಗವಹಿಸಿದ್ದರು
ಸಂಜೆ
ಜೀವ ವಿಸ್ಮಯ ಎಂಬ ಕಾರ್ಯಕ್ರಮದಲ್ಲಿ
ಸಾಕ್ಷ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು,ಸಸ್ಯಶಾಸ್ತ್ರ ಉಪನ್ಯಾಸಕರಾದ ರಾಘವೇಂದ್ರರವರು ಇದನ್ನು ನಡೆಸಿಕೊಟ್ಟರು
ಇದೇ ದಿನ ರಾತ್ರಿ ತೀರ್ಥಹಳ್ಳಿ ಕಾಲೇಜಿನ ಉಪನ್ಯಾಸಕರಾದ ಸೋಮಯಾಜಿಯವರಿಂದ ಖಗೋಳ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡ ವಿಜ್ಞಾನ ಉತ್ಸವ 2017 ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು