Thursday, September 15, 2016

62 ನೇ ವನ್ಯ ಜೀವಿ ಸಪ್ತಾಹದ ಸ್ಪರ್ಧೆಗಳು

ದಿನಾಂಕ 15-09-2016 ರಂದು ಜೆಸಿಬಿಎಂ ಕಾಲೇಜು ಹಾಗು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೆರೆಕಟ್ಟೆ ವನ್ಯಜೀವಿ ವಿಭಾಗದ ವತಿಯಿಂದ  62 ನ ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರಾಥಮಿಕ,ಪ್ರೌಡ ಶಾಲಾ,ಪದವಿ ಪೂರ್ವ ಹಾಗು ಪದವಿ ವಿಭಾಗದ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು

ಪರಿಸರದ ಚಿತ್ರ ಬಿಡಿಸುವುದು, ವನ್ಯ ಪ್ರಾಣಿಗಳ ಚಿತ್ರಗಳನ್ನು ಗುರುತಿಸುವುದು, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಶೃಂಗೇರಿ ತಾಲೂಕಿನ ವಿವಿಧ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು

ಕೆರೆಕಟ್ಟೆ ವಲಯ ಅರಣ್ಯ ಅಧಿಕಾರಿ ಗೋಪಾಲ್ ಹಾಗು ಅವರ ಸಿಬ್ಬಂದಿಗಳು ಕಾರ್ಯಕ್ರಮದ ಆಯೋಜನೆಯನ್ನು ಮಾಡಿದ್ದರು. ಉಪನ್ಯಾಸಕರಾದ ರಾಘವೇಂದ್ರ, ಅಭಿಜಿತ್ ಕಾರ್ಯಕ್ರಮಗಳ ನಿರ್ವಹಣೆಯನ್ನು ಮಾಡಿದರು. ಸ್ಪರ್ಧೆಗಳ ತೀರ್ಪುಗಾರರಾಗಿ ಡಾ!! ಕುಮಾರಸ್ವಾಮಿ ಉಡುಪ, ಶ್ರೀ ದೇವದಾಸ್, ಪ್ರಸನ್ನ ಹಾಗು ಕುಮಾರಿ ಮೇಘಾನರವರು ಕಾರ್ಯ ನಿರ್ವಹಿಸಿದರು

ಈ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ನಶಿಸುತ್ತಿರುವ ಪರಿಸರವನ್ನು ಉಳಿಸುವ ಮುಂದಿನ ಪೀಳಿಗೆಯ ಆಶಾಕಿರಣಗಳಂತೆ ಕಂಡರು



















ಗುರುನಮನ

ದಿನಾಂಕ 07-09 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗುರುನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮಕ್ಕೆ ಮಹಾರಾಣಿ ಕಾಲೇಜಿನ ಅಧ್ಯಾಪಕಿಯದಂತಹ ಡಾII ಆಶಾದೇವಿ ಯವರು ಅಗಮಿಸಿ ದತ್ತಿ ಉಪನ್ಯಾಸ ನೀಡಿದರು

ತಮ್ಮ ಉಪನ್ಯಾಸದಲ್ಲಿ ಅವರು "ವಿದ್ಯಾರ್ಥಿಗಳ ಹಾಗು ಗುರುಗಳ ಸಂಬಂಧ ತಾಯಿ-ಮಕ್ಕಳ ಸಂಬಂಧವಿದ್ದಂತೆ. ಹೇಗೆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲವೋ ಹಾಗೆ ಗುರುವಿನ ಋಣವನ್ನು ವಿದ್ಯಾರ್ಥಿಯಿಂದ ತೀರಿಸಲು ಸಾಧ್ಯವಿಲ್ಲ. ಗುರುವಿಗೆ ಗೌರವವನ್ನು ನೀಡುವುದು ವಿದ್ಯಾರ್ಥಿಗಳ ಕರ್ತವ್ಯ " ಎಂದು ನುಡಿದರು



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೆಂಕಟೇಶ್ ರವರು ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಚಾರ್ಯರಾದ ದೇವಿದಾಸ್ ಎಸ್. ನಾಯ್ಕ್ ರವರು ಉಪಸ್ಥಿತಿರಿದ್ದರು

ರೋಟ್ರಾಕ್ಟ ಸಂಘದ ಉದ್ಘಾಟನಾ ಕಾರ್ಯಕ್ರಮ

ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರೋಟ್ರಾಕ್ಟ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 03ರಂದು ಹಮ್ಮಿಕೊಳ್ಳಲಾಗಿತ್ತು

ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗು ಮಲೆನಾಡು ವಿದ್ಯಾಸಂಸ್ಥೆ ಯ ಅಧ್ಯಕ್ಷರಾದ T.D ರಾಜೇಗೌಡ್ರು ಆಗಮಿಸಿದ್ದರು

"ವಿದ್ಯಾರ್ಥಿಗಳು ರಾಜಕೀಯದಲ್ಲಿ ತೊಡಗಿಸಿಕೊಲ್ಲುವುದಕ್ಕಿಂತ, ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಆಗ ಸಮಾಜದ ಅಭಿವೃದ್ಧಿಯಾಗುತ್ತದೆ" ಎಂದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಸೇವೆಯ ಮಹತ್ವವನ್ನು ತಿಳಿಸಿದರು ಹಾಗು ಮುಂದಿನ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು




NSS ಗೀತೆಗಳ ಗಾಯನ ತರಬೇತಿ

ಸೆಪ್ಟೆಂಬರ್ 13 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಎನ್.ಎಸ್.ಎಸ್ ಗೀತೆಗಳ ಗಾಯನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇದಕ್ಕೆ ತರಬೇತುದಾರರಾಗಿ ನಾಗರಾಜ ರಾವ್ ರವರು ಆಗಮಿಸಿದ್ದರು. ಸ್ವಯಂ ಸೇವಕರಿಗೆ ಹಾಡಿನ ಧಾಟಿಯನ್ನು ಹಾಗು ಅದರ ಅರ್ಥವನ್ನು ಅತ್ಯಂತ ಸುಂದರವಾಗಿ ಹೇಳಿಕೊಟ್ಟರು




ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...